ತಂಪಾದ ಮರದಡಿ ಕುಳಿತರು ತಂಪಾದ ಗಾಳಿ ಬೀಸಲಿಲ್ಲ ,
ಇಂಪಾದ ಗಾನ ಕೇಳಿದರೂ ಗಾನದಲ್ಲಿ ಮಾದುರ್ಯವಿಲ್ಲ ,
ಸುಂದರವಾದ ಹೂವ ಕಂಡರೂ ಸೌಂದರ್ಯ ಕಾಣಲಿಲ್ಲ,
ಕಾರಣ ಅದೊಂದೇ ಪ್ರಿಯ , ನೀ ನನ್ನ ಬಳಿ ಇಲ್ಲ.
ಮುಂದೆ ಜೀವನದ ದಾರಿ ಕವಲೋದೆದಾಗ ,
ಕವಲೊಡೆದ ದಾರಿಯಲಿ ಪಯಣ ಸಾಗಿದಾಗ,
ಪಯನದಾ ನಡುವೆ ಒಮ್ಮೆ ಹಿಂತಿರುಗಿ ನೋಡಿದಾಗ,
ನನ್ನ ನೆನಪಿರಲಿ .

