ನೀ ಬರೆದ ಸಾಲುಗಳು ಸಾಲಲ್ಲ..ಅವು ನನ್ನೆದೆಯ ಮಿಡಿತಗಳು

Posted by: meghnapayas

Tagged in: Untagged 

ನನ್ನೊಲವಿನ ಕನಸಿನಲಿ ನೀ ಹಾಡುವ ಕೊಗಿಲೆಯಾದೆ , ಕುಣಿವ ನವಿಲಾದೆ, 

ನೀ ಬಂದರೆ ಕನಸಿನಲಿ ನನಗಿನ್ನೇನಿದೆ ಬದುಕಿನಲಿ 
ನೀ ಬರುವುದೇ ಪುಣ್ಯ ಆಗಲೇ ಜೀವನ ಧನ್ಯ .

ನೀ  ನಡೆವ  ಹಾದಿಯ ಹೂವಾದರೂ ಚೆನ್ನ ದೇವರ ಮುದಿಯೇರುವುದೆ ಸಾಯುವ ಮುನ್ನ..?,

ನನ್ನ  ನಗುವ ಹುಣ್ಣಿಮೆಯು ನೀನೆ 
ಮೀಟುವೆಯಾ ಈ ಬಾಳ ವೀಣೆ..? 

ಜನುಮ ಜನುಮದಲ್ಲೂ ನಿನ್ನವಳೇ ನಾ 
ಕೂಡಿ ಬರುವಯ ನನ್ನೊಡನೆ ನೀ .....?